ಗೌರಿಕಾ ಸಿಂಗ್ (ಜನನ ೨೬ ನವೆಂಬರ್ ೨೦೦೨) ನೇಪಾಳಿ ಈಜುಗಾರ್ತಿ. ಎಂಟನೇ ವಯಸ್ಸಿನಲ್ಲಿ ತನ್ನ ಈಜು ವೃತ್ತಿಜೀವನವನ್ನು ಪ್ರಾರಂಭಿಸಿದಾಗಿನಿಂದ ಅವರು ಅನೇಕ ರಾಷ್ಟ್ರೀಯ ದಾಖಲೆಗಳನ್ನು ಹೊಂದಿದ್ದಾರೆ. ನೇಪಾಳದಲ್ಲಿ (೨೦೧೯) ನಡೆದ ದಕ್ಷಿಣ ಏಷ್ಯಾದ ಪಂದ್ಯಗಳಲ್ಲಿ ೪ ಚಿನ್ನದ ಪದಕಗಳನ್ನು ಗೆದ್ದ ದಾಖಲೆಯನ್ನು ಮಾಡಿದ್ದಾರೆ. ೨೦೧೬ ರ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಈಜಿಗಾಗಿ ಅವರು ಎರಡು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಮಹಿಳೆಯರ ೧೦೦ ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ನೇಪಾಳವನ್ನು ಪ್ರತಿನಿಧಿಸುವ ಅತ್ಯಂತ ಕಿರಿಯ ಒಲಿಂಪಿಯನ್ ಆಗಿ ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ೨೦೧೬ ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. == ವೈಯಕ್ತಿಕ ಜೀವನ == ಗೌರಿಕಾ ಸಿಂಗ್ ಮೂಲತಃ ಕಾಂಚನಪುರದ ಭೀಮುಟ್ಟಾ ಪುರಸಭೆಯಿಂದ ಬಂದವರು, ಆದರೆ ಈಗ ಇವರು ಲಂಡನ್ ನಲ್ಲಿ ವಾಸಿಸುತ್ತಿದ್ದಾರೆ ಮತ್ತು ತರಬೇತಿ ನೀಡುತ್ತಿದ್ದಾರೆ. ಸಿಂಗ್ ಅವರ ತಂದೆ, ಪರಾಸ್ ಸಿಂಗ್, ಆಗಾಗ್ಗೆ ಪ್ರಪಂಚದಾದ್ಯಂತ ಅವಳೊಂದಿಗೆ ಹೋಗುತ್ತಾರೆ ಮತ್ತು ಬೆಂಬಲಿಸುತ್ತಾರೆ. ಸಿಂಗ್ ಬಾಲಕಿಯರ ಹ್ಯಾಬರ್ಡಶರ್ಸ್ ಆಸ್ಕೆ ಶಾಲೆಯಲ್ಲಿ ಮತ್ತು ಬೆಲ್ಮಾಂಟ್ ಮಿಲ್ ಹಿಲ್ ಪ್ರಿಪರೇಟರಿ ಶಾಲೆಯಲ್ಲಿ ಅಧ್ಯಯನ ಮಾಡಿದರು. == ಬೇಸಿಗೆ ಒಲಿಂಪಿಕ್ಸ್ ೨೦೧೬ == ೧೩ ನೇ ವರ್ಷ, ೨೦೧೬ ರ ರಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಅತ್ಯಂತ ಕಿರಿಯ ಕ್ರೀಡಾಪಟು ಸಿಂಗ್. ಅವರು ೧:೦೮:೪೫ ಸಮಯದಲ್ಲಿ ೧೦೦ ಮೀ ಬ್ಯಾಕ್‌ಸ್ಟ್ರೋಕ್‌ನ ಗೆದ್ದರು ಆದರೆ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿಲ್ಲ. ಸಿಂಗ್ ೩೧ ನೇ ಸ್ಥಾನ ಗಳಿಸಿದರು. == ಸಾಧನೆಗಳು == == ಉಲ್ಲೇಖಗಳು ==